ಈಡನ್ ಗ್ಲೋಬಲ್ ಸ್ಕೂಲ್‌ನಲ್ಲಿ ವಿದ್ಯಾರ್ಥಿ ಸಂಘದ ಪದಗ್ರಹಣ ಸಮಾರಂಭ

Date:

ಪುತ್ತೂರು: ಈಡನ್ ಗ್ಲೋಬಲ್ ಸ್ಕೂಲ್ ಬೆಳಂದೂರಿನಲ್ಲಿ 2026–27ನೇ ಸಾಲಿನ ವಿದ್ಯಾರ್ಥಿ ಸಂಘದ ಪದಗ್ರಹಣ ಸಮಾರಂಭವು ವಿಜೃಂಭಣೆಯಿಂದ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಲೀಫ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಅಶ್ರಫ್ ಶಾ ಮಾಂತೂರ್ ಅವರು ವಹಿಸಿ ಚುನಾಯಿತ ವಿದ್ಯಾರ್ಥಿ ಪದಾಧಿಕಾರಿಗಳಿಗೆ ಶುಭಹಾರೈಸಿದರು. ಟ್ರಸ್ಟ್ ಸದಸ್ಯರಾದ ಪುತ್ತು ಬಾವ ಹಾಜಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಿದ್ಯಾರ್ಥಿಗಳಿಗೆ ನಾಯಕತ್ವದ ಪರಿಕಲ್ಪನೆಯ ಕುರಿತು ಮಾತನಾಡಿ ಪ್ರತಿಜ್ಞಾ ಬೋಧನೆಯನ್ನು ಪ್ರಾಂಶುಪಾಲರಾದ ರಂಝಿ ಮುಹಮ್ಮದ್ ಅವರು ನಡೆಸಿದರು.

ಸಮಾರಂಭದ ವೇದಿಕೆಯಲ್ಲಿ ಸಂಸ್ಥೆಯ ಕಾರ್ಯದರ್ಶಿ ಬಶೀರ್ ಹಾಜಿ ಸವಣೂರು, ಕೋಶಾಧಿಕಾರಿ ನಿಝಾರ್ ದರ್ಬೆ ಹಾಗೂ ಉಪಪ್ರಾಂಶುಪಾಲರಾದ ಅಝ್ಹರ್ ಅವರು ವಿದ್ಯಾರ್ಥಿ ನಾಯಕರ ಜವಾಬ್ದಾರಿ, ನಾಯಕತ್ವ, ಶಿಸ್ತು ಮತ್ತು ಸೇವಾ ಮನೋಭಾವದ ಕುರಿತು ಪ್ರೇರಣಾದಾಯಕ ಮಾತುಗಳನ್ನಾಡಿದರು.

ಮೌಲ್ಯ ಶಿಕ್ಷಣದ ಮುಖ್ಯ ಶಿಕ್ಷಕರಾದ ಡಾ. ನಿಝಾಮುದ್ದೀನ್ ಝೈನಿ ಉಸ್ತಾದ್, ಶೈಕ್ಷಣಿಕ ಸಂಯೋಜಕಿ ಹರ್ಷಿತಾ, ECCE ಸಂಯೋಜಕಿ ಶ್ರುತಿ ಶೆಟ್ಟಿ, ಶಾಲಾ ಚುನಾವಣಾ ಆಯುಕ್ತೆ ಉಬೈದಾ ಶಹರ್ ಬಾನು ಹಾಗೂ ಮೇಲ್ವಿಚಾರಕರಾದ ಇಬ್ರಾಹಿಂ ಅವರು ಉಪಸ್ಥಿತರಿದ್ದರು.

ಶಾಲಾ ನಾಯಕನಾಗಿ ಮುಹಮ್ಮದ್ ನಿಹಾದ್,ನಾಯಕಿಯಾಗಿ ಫಾತಿಮಾ ಶಝ, ಉಪನಾಯಕನಾಗಿ ಮುಹಮ್ಮದ್ ಅಫ್ರಾಝ್ ,ಉಪನಾಯಕಿಯಾಗಿ ಐಫಾ ಫಾತಿಮಾ,ಶಿಸ್ತು ಸಮಯಪಾಲನ ಸಚಿವರುಗಳಾಗಿ ಮುಹಮ್ಮದ್ ಶಾಹಿಕ್, ಆಯಿಷಾ ಬಿ.ಎಚ್ , ಆರೋಗ್ಯ ಸಚಿವರುಗಳಾಗಿ ಹಸನ್ ಸಹಾದ್,ಆಸಿಯಾ ನಿಯಾಬಾ, ಸಾಂಸ್ಕೃತಿಕ ಸಚಿವರುಗಳಾಗಿ ಮುಹಮ್ಮದ್ ಜಲಾಲ್, ರಿದಾ ಫಾತಿಮಾ ಹಾಗೂ ಕ್ರೀಡಾ ಸಚಿವರುಗಳಾಗಿ ಮುಹಮ್ಮದ್ ಅಹ್ಸಾನ್, ನಿದಾ ಫಾತಿಮಾ ಹಾಗೂ ಎಮೆರಾಲ್ಡ್ ತಂಡದ ನಾಯಕರುಗಳಾಗಿ ಅಫ್ರಾಝ್, ಫಾತಿಮಾ ಫಿದಾ, ಡೈಮಂಡ್ ತಂಡದ ನಾಯಕರುಗಳಾಗಿ ಮುಹಮ್ಮದ್ ರಾಫಿಲ್, ಶಝ್ಮಿ ಫಾತಿಮಾ, ಎಲೆಕ್ಟ್ರಮ್ ತಂಡದ ನಾಯಕರುಗಳಾಗಿ ಮುಹಮ್ಮದ್ ಶಫಿಲ್, ಆಯಿಷಾ ಶಿಝ, ನೆಕರ್ ತಂಡದ ನಾಯಕರುಗಳಾಗಿ ಸ್ವಫಾಫ್ ಫಾತಿಮಾ ಸಹಿದಾ ಪ್ರತಿಜ್ಞಾ ಬೋಧನೆಯನ್ನು ಸ್ವೀಕರಿಸಿದರು. ಚುನಾವಣಾ ಜಾಗೃತಿಗಾಗಿ ನಡೆಸಲಾದ ಸ್ಪರ್ಧೆಗಳ ಬಹುಮಾನಗಳನ್ನು ಕಾರ್ಯಕ್ರಮದಲ್ಲಿ ವಿತರಿಸಲಾಯಿತು. ಕಾರ್ಯಕ್ರಮವನ್ನು ನಾದಿಯಾ ನಿರೂಪಿಸಿದರೆ, ಉಬೈದಾ ಶಹರ್ ಬಾನು ಸ್ವಾಗತಿಸಿ, ಖಾಲಿಸ ಅವರು ವಂದನಾರ್ಪಣೆ ಸಲ್ಲಿಸಿದರು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಕರ್ನಾಟಕ ರಾಜ್ಯ ಲೆಕ್ಕಪರಿಶೋಧಕರ ಸಂಘದ ಅಧ್ಯಕ್ಷರಾಗಿ ಸಿ.ಎ. ಸುನಿಲ್ ಭಂಡಾರಿ ಆಯ್ಕೆ

ಮಂಗಳೂರು: 2026-27ನೇ ಸಾಲಿನ ಕರ್ನಾಟಕ ರಾಜ್ಯ ಲೆಕ್ಕಪರಿಶೋಧಕರ ಸಂಘದ (KSCAA) ಅಧ್ಯಕ್ಷರಾಗಿ...

ಆಗಸ್ಟ್ 26 ರಂದು ಅಬುದಾಬಿಯಲ್ಲಿ ಬೃಹತ್ ಮೀಲಾದ್ ಸಮಾವೇಶಕ್ಕೆ ಭರದ ಸಿದ್ಧತೆ

ಅಬುದಾಬಿ: ಪ್ರವಾದಿ ಮುಹಮ್ಮದ್ ﷺ ರವರ ಜನ್ಮದಿನದ ಪ್ರಯುಕ್ತ ಕರ್ನಾಟಕ ಕಲ್ಚರಲ್...

ಗ್ರೀನ್ ವೀವ್ ಶಾಲೆಯಲ್ಲಿ ನವೋದ್ಯಮ ಮತ್ತು ಉದ್ಯಮಶೀಲತಾ ಅರಿವು ಕಾರ್ಯಕ್ರಮ

ಕೊಣಾಜೆ, ಆ.18: ಗ್ರೀನ್ ವೀವ್ ಪ್ರೌಢಶಾಲೆ,ಅಡ್ಕರೆಪಡ್ಪು, ಇಲ್ಲಿನ ಅಟಲ್ ಟಿಂಕರಿಂಗ್ ಲ್ಯಾಬ್...

ಈದ್ ಮಿಲಾದ್ ಸಾರ್ವತ್ರಿಕ ರಜೆ ಆಗಸ್ಟ್ 25ಕ್ಕೆ ಬದಲಾವಣೆ: ಉಸ್ತುವಾರಿ ಸಚಿವ, ಡಿಸಿ ಗೆ ಮನವಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಗಸ್ಟ್ 25 ರಂದು ಮೀಲಾದ್ ಸರಕಾರಿ...