ಉಳ್ಳಾಲ ಬಿಜೆಪಿ ಕಚೇರಿಯಲ್ಲಿ 80ನೇ ಸ್ವಾತಂತ್ರ ಸಂಭ್ರಮ

Date:

ಮಂಗಳೂರು ಮಂಡಲದ ತೊಕ್ಕೊಟ್ಟು ಮುಖ್ಯ ಕಚೇರಿಯಲ್ಲಿ ಭಾರತದ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಬಿಜೆಪಿ ಮಂಗಳೂರು ಮಂಡಲದ ಅಧ್ಯಕ್ಷರಾದ ಶ್ರೀ ಜಗದೀಶ್ ಆಳ್ವ ಕುವೆತ್ತಬೈಲ್ ರವರು ಧ್ವಜಾರೋಹಣ ನೆರವೇರಿಸಿ ಎಲ್ಲಾರಿಗೂ 80ನೇ ಸ್ವಾತಂತ್ರ್ಯೋತ್ಸವದ ಶುಭಾಶಯ ತಿಳಿಸಿದರು, ದೇಶಕ್ಕಾಗಿ ತ್ಯಾಗ ಬಲಿದಾನ ಸ್ಮರಿಸಿ ಭಾರತದ ಹೆಮ್ಮೆ ಪ್ರಧಾನಿಯವರ ಕನಸಿನ ವಿಕಸಿತ ಭಾರತದ ಸಂಕಲ್ಪದೊಂದಿಗೆ, ಅಭಿವೃದ್ಧಿಯ ಹೊಸ ಪಥದಲ್ಲಿ ಮುನ್ನಡೆಯುತ್ತಿರುವ ಹೆಮ್ಮೆಯ ಭಾರತ ಆತ್ಮನಿರ್ಭರತೆ, ಆಧುನಿಕ ತಂತ್ರಜ್ಞಾನ, ಬಲಿಷ್ಠ ಮೂಲಸೌಕರ್ಯ, ಯುವಶಕ್ತಿ ಮತ್ತು ಜನಕೇಂದ್ರಿತ ಅಭಿವೃದ್ಧಿಯ ಮೂಲಕ ಭಾರತವು ವಿಶ್ವದ ಮುಂಚೂಣಿ ರಾಷ್ಟ್ರವಾಗಿ ಬೆಳೆಯುತ್ತಿದೆ.
“ವಿಕಸಿತ ಭಾರತ – ಬೆಳೆಯುತ್ತಿರುವ ಭಾರತ” ಎಂಬ ಸಂಕಲ್ಪದೊಂದಿಗೆ ಪ್ರತಿಯೊಬ್ಬ ಭಾರತೀಯನೂ ರಾಷ್ಟ್ರ ನಿರ್ಮಾಣದಲ್ಲಿ ತನ್ನ ಕೊಡುಗೆ ನೀಡೋಣ.
ಒಗ್ಗಟ್ಟಿನಿಂದ, ಪ್ರಗತಿಯೊಂದಿಗೆ, ಸಮೃದ್ಧಿಯತ್ತ ಭಾರತವನ್ನು ಮುನ್ನಡೆಸೋಣ ಎಂದು ಹೇಳಿದ್ದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು, ಜಿಲ್ಲಾ ಕಾರ್ಯದರ್ಶಿ ಧನಲಕ್ಷ್ಮೀ ಗಟ್ಟಿ,
ಜಿಲ್ಲಾ ಮಾಧ್ಯಮ ಸಹಪ್ರಮುಖ್ ಹೇಮಂತ್ ಶೆಟ್ಟಿ ದೇರಳಕಟ್ಟೆ, ರಾಜ್ಯ ಅಲ್ಪ ಸಂಖ್ಯಾತ ಮೋರ್ಚಾ ಕಾರ್ಯಕಾರಿಣಿ ಸದಸ್ಯರಾದ ಸಿರಾಜ್ ಮುಡಿಪು,ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ಹರಿಯಪ್ಪ ಸಾಲಿಯಾನ್, ಹರೀಶ್ ಪೂಜಾರಿ ಆಂಬ್ಲಮೊಗರು
ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿ ಪ್ರವೀಣ್ ಮಿತ್ರನಗರ, ಮಂಡಲ ಉಪಾಧ್ಯಕ್ಷರಾದ ರವಿ ಶಂಕರ್ ಸೋಮೇಶ್ವರ, ಮಂಡಲ ಕಾರ್ಯದರ್ಶಿ ಗಳಾದ ಸುರೇಖಾ ಮುನ್ನೂರು, ಕಿಶೋರ್ ಕುತ್ತಾರು, ಭರತ್ ಗಟ್ಟಿ ಕೊಣಾಜೆ, ರಾಜೇಶ್ ಜಾಲ ಹಿತ್ಲು,ಮಂಡಲ ಕಚೇರಿ ಕಾರ್ಯದರ್ಶಿ ಶ್ರೀಮತಿ ಸುಜಾತ ಬಿ ಶೆಟ್ಟಿ, ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷರಾದ ಮಾಧವಿ ಉಳ್ಳಾಲ, ಯುವ ಮೋರ್ಚಾ ಅಧ್ಯಕ್ಷರಾದ ಮುರಳೀಧರ ಕೊಣಾಜೆ, ಮಂಡಲ ಹಿಂದುಳಿದ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಗಣೇಶ್ ಕಾಪಿಕಾಡ್, ಮಂಡಲ ಸಾಮಾಜಿಕ ಜಾಲತಾಣ ಸಂಚಾಲಕರು ಗಣೇಶ್ ಭಂಡಾರಿ ನಡಾರ್, ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಸ್ವಪ್ನ ಶೆಟ್ಟಿ, ವಿನುತಾ ದೇವಾಡಿಗ, ಯುವ ಮೋರ್ಚಾಪ್ರಧಾನ ಕಾರ್ಯದರ್ಶಿಗಳಾದ ದೀಕ್ಷಿತ್ ಕಾಫಿಕಾಡ್,ಯುವ ಮೋರ್ಚಾ ಉಪಾಧ್ಯಕ್ಷರು ಮನ್ವಿತ್ ಕಾಪಿಕಾಡ್,ಯುವ ಮೋರ್ಚಾ ಸಾಮಾಜಿಕ ಜಾಲತಾಣ ಪ್ರಮುಖ್ ಪ್ರಖ್ಯಾತ್ ತಲಪಾಡಿ, ಯುವ ಮೋರ್ಚಾ ಸದಸ್ಯರು ಧನ್ ರಾಜ್ ಶೆಟ್ಟಿಗಾರ್ ಕೊಣಾಜೆ,ಮಹಿಳಾ ಮೋರ್ಚಾ ಉಪಾಧ್ಯಕ್ಷರು ಆಶಾ ಶೆಟ್ಟಿ ತಲಪಾಡಿ, ಮಂಡಲ ಮಹಿಳಾ ಮೋರ್ಚಾ ಉಪಾಧ್ಯಕ್ಷರಾದ ಜಯಶ್ರೀ ಕೊಲ್ಯ ಮಹಿಳಾ ಮೋರ್ಚಾ ಕಾರ್ಯದರ್ಶಿಗಳಾದ ವಿಶಾಲಾಕ್ಷಿ ಮಾಡೂರು, ಸುಮಿತ್ರ ಆಚಾರ್ಯ, ಮಹಿಳಾ ಮೋರ್ಚಾ ಸಾಮಾಜಿಕ ಜಾಲತಾಣ ಪ್ರಮುಖ್ ವಾಣಿ ಗೌಡ ಮಹಿಳಾ ಮೋರ್ಚಾ ಸದಸ್ಯರು ಆಶಾ ಗಟ್ಟಿ, ಮಂಡಲ ಕಚೇರಿ ಸಿಬ್ಬಂದಿ ಶಿಲ್ಪಾ, ಹಾಗೂ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.

ಬಿಜೆಪಿ ಮಂಗಳೂರು ಮಂಡಲದ ಪ್ರಧಾನ ಕಾರ್ಯದರ್ಶಿ ವಕೀಲರಾದ ಮೋಹನ್ ರಾಜ್ ಕೆ ಆರ್ ಸ್ವಾಗತಿಸಿ ಪ್ರಸ್ತಾಪಿಸಿದ್ದರು.
ಬಿಜೆಪಿ ಮಂಗಳೂರು ಮಂಡಲದ ಪ್ರಧಾನ ಕಾರ್ಯದರ್ಶಿ ದಯಾನಂದ್ ತೊಕ್ಕೊಟ್ಟು ವಂದಿಸಿದರು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಕರ್ನಾಟಕ ರಾಜ್ಯ ಲೆಕ್ಕಪರಿಶೋಧಕರ ಸಂಘದ ಅಧ್ಯಕ್ಷರಾಗಿ ಸಿ.ಎ. ಸುನಿಲ್ ಭಂಡಾರಿ ಆಯ್ಕೆ

ಮಂಗಳೂರು: 2026-27ನೇ ಸಾಲಿನ ಕರ್ನಾಟಕ ರಾಜ್ಯ ಲೆಕ್ಕಪರಿಶೋಧಕರ ಸಂಘದ (KSCAA) ಅಧ್ಯಕ್ಷರಾಗಿ...

ಆಗಸ್ಟ್ 26 ರಂದು ಅಬುದಾಬಿಯಲ್ಲಿ ಬೃಹತ್ ಮೀಲಾದ್ ಸಮಾವೇಶಕ್ಕೆ ಭರದ ಸಿದ್ಧತೆ

ಅಬುದಾಬಿ: ಪ್ರವಾದಿ ಮುಹಮ್ಮದ್ ﷺ ರವರ ಜನ್ಮದಿನದ ಪ್ರಯುಕ್ತ ಕರ್ನಾಟಕ ಕಲ್ಚರಲ್...

ಗ್ರೀನ್ ವೀವ್ ಶಾಲೆಯಲ್ಲಿ ನವೋದ್ಯಮ ಮತ್ತು ಉದ್ಯಮಶೀಲತಾ ಅರಿವು ಕಾರ್ಯಕ್ರಮ

ಕೊಣಾಜೆ, ಆ.18: ಗ್ರೀನ್ ವೀವ್ ಪ್ರೌಢಶಾಲೆ,ಅಡ್ಕರೆಪಡ್ಪು, ಇಲ್ಲಿನ ಅಟಲ್ ಟಿಂಕರಿಂಗ್ ಲ್ಯಾಬ್...

ಈದ್ ಮಿಲಾದ್ ಸಾರ್ವತ್ರಿಕ ರಜೆ ಆಗಸ್ಟ್ 25ಕ್ಕೆ ಬದಲಾವಣೆ: ಉಸ್ತುವಾರಿ ಸಚಿವ, ಡಿಸಿ ಗೆ ಮನವಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಗಸ್ಟ್ 25 ರಂದು ಮೀಲಾದ್ ಸರಕಾರಿ...