ಉಚ್ಚಿಲದ ಅಫೀಫ ಫ್ರೆಂಡ್ಸ್ ವೆಲ್ಫೇರ್ ಟ್ರಸ್ಟ್ ಗೆ 30ರ ಸಂಭ್ರಮ

Date:


ಉಳ್ಳಾಲ: ಅಫೀಫ ಫ್ರೆಂಡ್ಸ್ ವೆಲ್ಫೇರ್ ಟ್ರಸ್ಟ್(ರಿ)ಉಚ್ಚಿಲ ಇದರ 30ನೇ ವಾರ್ಷಿಕೋತ್ಸವ ಕಾರ್ಯಕ್ರಮ ಉಚ್ಚಿಲ ಕಿಯಾಂಝ ಗಾರ್ಡನ್ ನಡೆಯಿತು.

ಉಚ್ಚಿಲ 407 ಜುಮಾ ಮಸೀದಿಯ ಮುದರ್ರಿಸ್ ಇಬ್ರಾಹಿಂ ಫೈಝಿ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಮೂವತ್ತು ವರ್ಷಗಳಿಂದ ಆಫೀಫ ಸಂಸ್ಥೆ ಕ್ರೀಡೆಗೆ ಪ್ರೋತ್ಸಾಹಿಸುವ ಜೊತೆಯಲ್ಲಿ ನಿರಂತರವಾಗಿ ಆಸಕ್ತರಿಗೆ ನೆರವಾಗುತ್ತಿದೆ ಎಂದು ಹೇಳಿದರು..

ಈ ಸಂದರ್ಭದಲ್ಲಿ ಊರಿನ ಹಿರಿಯ ವ್ಯಕ್ತಿ ಎಂ.ಎಚ್ ಪೋಕರ್ ಕುಂಞ ಹಾಗೂ ಧಾರ್ಮಿಕ ಸ್ಥಾಪನೆಗಳ ಅಭಿವೃದ್ಧಿಯಲ್ಲಿ ಸಕ್ರೀಯರಾದ ಕುಂಞ ಅಹಮ್ಮದ್ ಹಾಜಿ ಮತ್ತು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮೊಹಮ್ಮದ್ ಅಲಿ ಜಿ.ಎಂ.ಎಚ್ ಉಚ್ಚಿಲ ರವರನ್ನು ಸನ್ಮಾನಿಸಲಾಯಿತು.

ಅಫೀಫ ಫ್ರೆಂಡ್ಸ್ ವೆಲ್ಫೇರ್ ಟ್ರಸ್ಟ್ ಅಧ್ಯಕ್ಷ ಅಬೂಬಕ್ಕರ್ ಸಿದ್ದೀಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಈ ಸಂದರ್ಭದಲ್ಲಿ ಕಾಲ್ಚೆಂಡು ತಂಡದ ಸಮವಸ್ತ್ರ ವನ್ನು ಪ್ರ.ಕಾರ್ಯದರ್ಶಿ ಅಹ್ಮದ್ ಝಿಶಾನ್ ಹಾಗೂ ಕೋಶಾಧಿಕಾರಿ ಸಿರಾಜ್.ಕೆ ಉಚ್ಚಿಲ ಬಿಡುಗಡೆಗೊಳಿಸಿದರು.

ಹೋಪ್ ಫೌಂಡೇಶನ್ ಸ್ಥಾಪಕ ಸೈಫ್ ಸುಲ್ತಾನ್ “ಪೋಷಣೆ ಮತ್ತು ಪೋಷಕತ್ವ ಇಂದಿನ ಜವಾಬ್ದಾರಿಗಳು” ಮತ್ತು ಸವಾದ್ ಅಲಿ ಮಂಗಳೂರು “ಯುವಜನತೆ ಆರೋಗ್ಯ ಕರ ಜೀವನಶೈಲಿ ಮತ್ತು ಸಾಮಾಜಿಕ ಜಾಗೃತಿ” ಎಂಬ ವಿಷಯದ ಕುರಿತು ವಿಚಾರ ಮಂಡಿಸಿದರು.

ಕ್ರೀಡಯಿಂದ ಸೇವೆಗೆ- ಮೂರು ದಶಕಗಳ ಪಯಣ ಅಫೀಫಾ ಸ್ಮರಣ ಸಂಚಿಕೆಯನ್ನು ಆಫೀಫ ಸಂಘಟನೆ ಸ್ಥಾಪಕ ಮೊಹಮ್ಮದ್ ಶಮೀರ್ ಬಿಡುಗಡೆಗೊಳಿಸಿದರು.

ಉಚ್ಚಿಲ ಗುಡ್ಡೆ ರಹ್ಮಾನಿಯಾ ಇಮಾಮ್ ಆಕ್ಬರ್ ಆಲಿ ಸ ಅದಿ, ಉಚ್ಚಿಲ 407 ಮಸೀದಿ ಯ ಅಧ್ಯಕ್ಷ ಇಸ್ಮಾಯಿಲ್ ಹಾಜಿ ಕೊಪ್ಪಳ, ಪೆರಿಬೈಲ್ ಮಸ್ಜಿದುಲ್ ಹುದಾ ಅಧ್ಯಕ್ಷ ಅಬ್ಬಾಸ್ ಹಾಜಿ, ಅಜ್ಜಿನಡ್ಕ ಬದ್ರಿಯ ಜುಮಾ ಮಸೀದಿ ಅಧ್ಯಕ್ಷ ಸುಲೈಮಾನ್ ಹಾಜಿ, ಬೈತುಲ್ಲಾ ಮಸೀದಿ ಅಧ್ಯಕ್ಷ ಮೊಹಿದ್ದೀನ್ ಕುಂಞ, ಯು.ಆರ್ ಆಕಾಡೆಮಿಯ ಪ್ರಚಾರಕ ಉಮೇಶ್ ಉಚ್ಚಿಲ್, ಫಲಾಹ್ ಎಜ್ಯುಕೇಷನಲ್ ಟ್ರಸ್ಟ್ ಅಧ್ಯಕ್ಷ ಯು.ಬಿ ಮೊಹಮ್ಮದ್ ಹಾಜಿ, ಲೈಫ್ ಲೈನ್ ಫೌಂಡೇಶನ್ ಅಧ್ಯಕ್ಷ ಅಬ್ಬಾಸ್ ಹಾಜಿ ಪೋಕರ್, ಮುಸ್ಲಿಂ ಬಾಂಧವ್ಯ ವೇದಿಕೆ ಕರ್ನಾಟಕ ರಾಜ್ಯಾಧ್ಯಕ್ಷ ಝಕೀರ್ ಹುಸೈನ್ ಉಚ್ಚಿಲ್, ಅಜ್ಜಿನಡ್ಕ ಬದ್ರಿಯಾ ವೆಲ್ಫೇರ್ ಸೊಸೈಟಿ ಅಧ್ಯಕ್ಷ ಇರ್ಷಾದ್ ಅಜ್ಜಿನಡ್ಕ, ಸೋಮೇಶ್ವರ ಪುರಸಭೆ ಸದಸ್ಯ ಅಬ್ದುಲ್ ಸಲಾಂ ಯು, ಮ್ಯಾಕ್ ಬ್ರದರ್ಸ್ ಅಧ್ಯಕ್ಷ ಹಾರಿಸ್ ಯು.ಎ, ನೂರುಲ್ ಇಸ್ಲಾಮ್ ಅಧ್ಯಕ್ಷ ಇಬ್ರಾಹಿಂ ಹಿಮಾಮಿ, ಬಿಎಸ್ ಬಿ ಅಧ್ಯಕ್ಷ ಅನಸ್ ಉಚ್ಚಿಲ, ಬಿಬಿಜಿ ಅಧ್ಯಕ್ಷ ಝುಲ್ಫಾಝ್ ಉಚ್ಚಿಲ ಉಪಸ್ಥಿತರಿದ್ದರು.

ಜೊತೆ ಕಾರ್ಯದರ್ಶಿ ಝೈನುದ್ದೀನ್ ನವಾಝ್ ಸಂಸ್ಥೆಯ ಕುರಿತು ಪ್ರಾಸ್ತಾವಿಕ ‌ಮಾತುಗಳನ್ನಾಡಿದರು.

ಅಫೀಫ ಫ್ರೆಂಡ್ಸ್ ವೆಲ್ಫೇರ್ ಟ್ರಸ್ಟ್ ಸದಸ್ಯ ನಾಸೀರ್ ಉಚ್ಚಿಲ ಕಾರ್ಯಕ್ರಮ ನಿರೂಪಿಸಿದರು. ಸದಸ್ಯ ಶಬೀರ್ ಇಸ್ಮಾಯಿಲ್ ಸ್ವಾಗತಿಸಿದರು. ಮಾಧ್ಯಮ ಸಂಚಾಲಕ ಇಬ್ರಾಹಿಂ ಖಲೀಲ್ ಅರೀಫ್ ವಂದಿಸಿದರು. ಉಚ್ಚಿಲ ಜುಮಾ‌ ಮಸೀದಿಯ ದಸ್೯ ವಿದ್ಯಾರ್ಥಿ ಉಮರ್ ಮೊಹಮ್ಮದ್ ಫಾಹಿಂ ಪ್ರಾರ್ಥನೆಗೈದರು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಮೂರು ವರ್ಷಗಳ ಬಳಿಕ ಕೆಪಿಸಿಸಿ ಕಚೇರಿಗೆ ಭೇಟಿ ನೀಡಿದ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್

ಬೆಂಗಳೂರು: ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರು ಮೂರು ವರ್ಷಗಳ ಬಳಿಕ ಕೆಪಿಸಿಸಿ...

ಕನಿಷ್ಠ ಎರಡು ಪರಿಷತ್ ಸ್ಥಾನ, ಒಂದು ರಾಜ್ಯಸಭಾ ಸ್ಥಾನ ಮುಸ್ಲಿಮರಿಗೆ ಕೊಡಿ: ಕಾಂಗ್ರೆಸ್‌ಗೆ ರಾಜ್ಯ ಮುಸ್ಲಿಮ್ ಸಂಘಟನೆಗಳ ಒಕ್ಕೂಟ ಆಗ್ರಹ

ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ ಹಾಗೂ ರಾಜ್ಯಸಭಾ ಚುನಾವಣೆಗಳು ಹತ್ತಿರವಾಗುತ್ತಿರುವ ಬೆನ್ನಲ್ಲೇ...

ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ 42 ರೂ. ಏರಿಕೆ

ಹೊಸದಿಲ್ಲಿ: 19 ಕೆಜಿ ತೂಕದ ವಾಣಿಜ್ಯ ಸಿಲಿಂಡರ್ ಬೆಲೆಯನ್ನು ಇಂದಿನಿಂದಲೇ ಜಾರಿಗೆ...