ಕರ್ನಾಟಕ ರಾಜ್ಯ ಯೂತ್ ಲೀಗಿಗೆ ನೂತನ ಸಾರಥ್ಯ

Date:

ಬೆಂಗಳೂರು: ಮುಸ್ಲಿಂ ಯೂತ್ ಲೀಗ್ ರಾಷ್ಟ್ರೀಯ ಸಮಿತಿಯು ಸಂಘಟನೆಯ ಬಲವರ್ಧನೆ ಅಭಿಯಾನದ ಭಾಗವಾಗಿ, ಕರ್ನಾಟಕ ರಾಜ್ಯ ಯೂತ್ ಲೀಗ್ ಸಮಿತಿಯನ್ನು ಪುನರ್ರಚಿಸಲಾಗಿದೆ. ಬೆಂಗಳೂರಿನ ಶಿಹಾಬ್ ತಂಙಳ್ ಸೆಂಟರ್‌ನಲ್ಲಿ ನಡೆದ ಕೌನ್ಸಿಲ್ ಸಭೆಯನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಟಿ.ಪಿ. ಅಶ್ರಫಲಿ ಉದ್ಘಾಟಿಸಿದರು.
​ಎಸ್.ಐ.ಆರ್. ಮೂಲಕ ಭಾರತದ ಮುಸ್ಲಿಂ ಹಿಂದುಳಿದ ಅಲ್ಪಸಂಖ್ಯಾತರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಿ ನಂತರ ಅವರಿಗೆ ಪೌರತ್ವವನ್ನು ನಿರಾಕರಿಸಲು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಚುನಾವಣಾ ಆಯೋಗದೊಂದಿಗೆ ಸೇರಿ ನಡೆಸುತ್ತಿರುವ ರಹಸ್ಯ ಕಾರ್ಯಾಚರಣೆ ಇದು ಎಂದು ಅಶ್ರಫಲಿ ಹೇಳಿದರು. ಇದನ್ನು ವಿರೋಧಿಸಿ ಭಾರತದ ಪರಂಪರೆಯನ್ನು ಎತ್ತಿಹಿಡಿಯುವ ಪ್ರತಿಕ್ರಿಯೆಗಳು ದೇಶಾದ್ಯಂತ ಕಾಣಸಿಗುತ್ತಿದ್ದು, ಇಂತಹ ಪ್ರತಿಭಟನೆಗಳಿಗೆ ಬೆಂಬಲವಾಗಿ ಯೂತ್ ಲೀಗ್ ರಾಷ್ಟ್ರೀಯ ಸಮಿತಿಯು ದೆಹಲಿಯಲ್ಲಿ “ವೋಟ್ ಚೋರಿ” ಪ್ರತಿಭಟನೆಯನ್ನು ನಡೆಸಿದೆ. ಬಿಹಾರದ ಕಿಶನ್‌ಗಂಜ್ ಸೇರಿದಂತೆ ಯೂತ್ ಲೀಗ್ ಘೋಷಿಸಿದ ಹೋರಾಟವೂ ಇದರ ಭಾಗವಾಗಿದೆ ಎಂದು ಅವರು ತಿಳಿಸಿದರು. ದಸ್ತಗೀರ್ ಬೇಗ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.
​ಕರ್ನಾಟಕ ರಾಜ್ಯದ ಉಸ್ತುವಾರಿ ವಹಿಸಿರುವ ರಾಷ್ಟ್ರೀಯ ಕಾರ್ಯದರ್ಶಿ ಸಾಜಿದ್ ನಡುಮಾಣೂರು ಅವರು ಸಮಿತಿ ಚುನಾವಣೆಯನ್ನು ನಿಯಂತ್ರಿಸಿದರು. ಯೂತ್ ಲೀಗ್ ರಾಷ್ಟ್ರೀಯ ಉಪಾಧ್ಯಕ್ಷ ಇನಾಂದಾರ್ ಧಾರವಾಡ, ಕಾರ್ಯದರ್ಶಿ ಸಿ.ಕೆ. ಶಾಕೀರ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಮೂರು ವರ್ಷಗಳ ಬಳಿಕ ಕೆಪಿಸಿಸಿ ಕಚೇರಿಗೆ ಭೇಟಿ ನೀಡಿದ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್

ಬೆಂಗಳೂರು: ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರು ಮೂರು ವರ್ಷಗಳ ಬಳಿಕ ಕೆಪಿಸಿಸಿ...

ಕನಿಷ್ಠ ಎರಡು ಪರಿಷತ್ ಸ್ಥಾನ, ಒಂದು ರಾಜ್ಯಸಭಾ ಸ್ಥಾನ ಮುಸ್ಲಿಮರಿಗೆ ಕೊಡಿ: ಕಾಂಗ್ರೆಸ್‌ಗೆ ರಾಜ್ಯ ಮುಸ್ಲಿಮ್ ಸಂಘಟನೆಗಳ ಒಕ್ಕೂಟ ಆಗ್ರಹ

ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ ಹಾಗೂ ರಾಜ್ಯಸಭಾ ಚುನಾವಣೆಗಳು ಹತ್ತಿರವಾಗುತ್ತಿರುವ ಬೆನ್ನಲ್ಲೇ...

ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ 42 ರೂ. ಏರಿಕೆ

ಹೊಸದಿಲ್ಲಿ: 19 ಕೆಜಿ ತೂಕದ ವಾಣಿಜ್ಯ ಸಿಲಿಂಡರ್ ಬೆಲೆಯನ್ನು ಇಂದಿನಿಂದಲೇ ಜಾರಿಗೆ...