ಸೇವೆಯಲ್ಲೂ ಸೌಜನ್ಯದಲ್ಲೂ ಮಾದರಿಯಾದ ಅಶ್ವಿನಿ ಮೇಡಂ

Date:

– ಡಿ. ಐ. ಅಬೂಬಕರ್ ಕೈರಂಗಳ

ಒಂದು ಬ್ಯಾಂಕ್‌ಗೆ ಜನರು ಬರುವಾಗ ಕೆಲವೊಮ್ಮೆ ಆತಂಕ, ಗೊಂದಲ, ತುರ್ತು ಅಗತ್ಯಗಳನ್ನೂ ಹೊತ್ತು ಬರುತ್ತಾರೆ. ಅವಿದ್ಯಾವಂತರಿಗೆ ಹೆಚ್ಚಿನ ಮಾಹಿತಿಗಳು ಗೊತ್ತಿರುವುದೂ ಇಲ್ಲ. ಸ್ಪೀಡಾಗಿ ಹೇಳಿದಾಗ ಪಕ್ಕನೆ ಅರ್ಥವಾಗದವರೂ ಇರುತ್ತಾರೆ. ಅಂತಹ ಸಂದರ್ಭದಲ್ಲಿ ಗ್ರಾಹಕರನ್ನು ಸಹನೆಯಿಂದ ಆಲಿಸಿ, ಸ್ಪಷ್ಟವಾಗಿ ಮಾರ್ಗದರ್ಶನ ನೀಡುವ ಅಧಿಕಾರಿಗಳು ವಿರಳ.

ಮಂಗಳೂರಿನ ಸ್ಟೇಟ್ ಬ್ಯಾಂಕ್‌ ಪ್ರಧಾನ ಶಾಖೆ ಬಹಳ ಪ್ರಸಿದ್ಧ. ಈ ಬ್ಯಾಂಕ್ ನಿಂದಾಗಿ ಈ ಏರಿಯಾದ ಹೆಸರೇ
” ಸ್ಟೇಟ್ ಬ್ಯಾಂಕ್ ” ಎಂದು ಖ್ಯಾತಿ ಪಡೆದಿದೆ.
ಈ ಬ್ಯಾಂಕಲ್ಲಿ ತುಂಬಾ ವರ್ಷಗಳ ಹಿಂದಿನಿಂದಲೇ ನಾನು ಖಾತೆ ಹೊಂದಿರುವುದರಿಂದ ವ್ಯವಹಾರ ನಿಮಿತ್ತ ಇಲ್ಲಿಗೆ ಭೇಟಿ ಕೊಡುತ್ತಿದ್ದೇನೆ. ಈ ಬ್ಯಾಂಕಿನ ಉಪ ವ್ಯವಸ್ಥಾಪಕಿ ಶ್ರೀಮತಿ ಅಶ್ವಿನಿ ಮೇಡಂ ಅವರನ್ನು ಕಳೆದ ಹದಿನೈದು ವರ್ಷಗಳಿಂದ ಗಮನಿಸುತ್ತಿರುವ ನನಗೆ, ಅವರ ಕೆಲಸದ ದಕ್ಷತೆ ಸದಾ ವಿಶೇಷವಾಗಿ ಕಾಣಿಸಿದೆ. ಬ್ಯಾಂಕ್‌ನಲ್ಲಿ ಎಷ್ಟೇ ಒತ್ತಡದ ವಾತಾವರಣ ಇದ್ದರೂ, ಗ್ರಾಹಕರ ಪ್ರಶ್ನೆಗಳಿಗೆ ಅವರು ತಾಳ್ಮೆಯಿಂದ ಉತ್ತರಿಸುವ ರೀತಿ ನಿಜಕ್ಕೂ ಮೆಚ್ಚುಗೆಗೆ ಪಾತ್ರ. ಯಾರೇ ಎದುರಿಗೆ ಬಂದರೂ ಮುಖದಲ್ಲಿ ಮಿಡಿಯುವ ಸೌಮ್ಯತೆ, ಮಾತಿನಲ್ಲಿ ಕಾಣುವ ವಿನಯ, ಸಮಸ್ಯೆಯನ್ನು ಅರ್ಥಮಾಡಿಕೊಂಡು ವಿವರಿಸುವ ಶೈಲಿ ಇವೆಲ್ಲವೂ ಅವರನ್ನು ಇತರರಿಂದ ವಿಭಿನ್ನರನ್ನಾಗಿಸುತ್ತದೆ.
ಕೆಲ ಅಧಿಕಾರಿಗಳು ಕೆಲಸದ ಒತ್ತಡದ ನೆಪದಲ್ಲಿ ಗ್ರಾಹಕರೊಂದಿಗೆ ದುಡುಕಾಗಿ ವರ್ತಿಸುವುದನ್ನು ನೋಡುತ್ತೇವೆ. ಅದು ಈ ಬ್ಯಾಂಕಿನಲ್ಲಿ ಎಂದಲ್ಲ, ಸಾಮಾನ್ಯವಾಗಿ ಎಲ್ಲಾ ಕಡೆ ಕಂಡು ಬರುವ ಅನುಭವ. ಆದರೆ ಅಶ್ವಿನಿ ಮೇಡಂ ಅವರಲ್ಲಿ ಅಂತಹ ಆತುರ, ಅಸಹನೆ ಕಾಣುವುದಿಲ್ಲ. ಪ್ರತಿಯೊಬ್ಬರನ್ನೂ ಗೌರವದಿಂದ ಕಾಣುವ ಅವರ ಸ್ವಭಾವವೇ ಜನರ ಮನ ಗೆದ್ದಿದೆ.
ಉದ್ಯೋಗ ಎನ್ನುವುದು ಕೇವಲ ಕರ್ತವ್ಯ ನಿರ್ವಹಣೆ ಮಾತ್ರವಲ್ಲ; ಅದರಲ್ಲಿ ಮಾನವೀಯತೆ ಮತ್ತು ಸೇವಾಭಾವವೂ ಇರಬೇಕು ಎಂಬುದಕ್ಕೆ ಅಶ್ವಿನಿ ಮೇಡಂ ಉತ್ತಮ ಉದಾಹರಣೆ. ತಮ್ಮ ಸೌಜನ್ಯ, ಪ್ರಾಮಾಣಿಕತೆ ಮತ್ತು ಶ್ರದ್ಧೆಯ ಸೇವೆಯಿಂದ ಅವರು ಅನೇಕ ಗ್ರಾಹಕರ ಮನದಲ್ಲಿ ವಿಶೇಷ ಸ್ಥಾನ ಪಡೆದಿದ್ದಾರೆ.
ಅವರಿಗೆ ಯಶಸ್ಸು, ಆರೋಗ್ಯ, ಐಶ್ವರ್ಯ, ಆಯುಷ್ಯ ವರ್ಧಿಸಲೆಂದು ಪರಮಾತ್ಮನಲ್ಲಿ ನನ್ನ ಪ್ರಾರ್ಥನೆ.– ಡಿ. ಐ. ಅಬೂಬಕರ್ ಕೈರಂಗಳ

ಅವರಿಗೆ ಯಶಸ್ಸು, ಆರೋಗ್ಯ, ಐಶ್ವರ್ಯ, ಆಯುಷ್ಯ ವರ್ಧಿಸಲೆಂದು ಪರಮಾತ್ಮನಲ್ಲಿ ನನ್ನ ಪ್ರಾರ್ಥನೆ.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಮೂರು ವರ್ಷಗಳ ಬಳಿಕ ಕೆಪಿಸಿಸಿ ಕಚೇರಿಗೆ ಭೇಟಿ ನೀಡಿದ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್

ಬೆಂಗಳೂರು: ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರು ಮೂರು ವರ್ಷಗಳ ಬಳಿಕ ಕೆಪಿಸಿಸಿ...

ಕನಿಷ್ಠ ಎರಡು ಪರಿಷತ್ ಸ್ಥಾನ, ಒಂದು ರಾಜ್ಯಸಭಾ ಸ್ಥಾನ ಮುಸ್ಲಿಮರಿಗೆ ಕೊಡಿ: ಕಾಂಗ್ರೆಸ್‌ಗೆ ರಾಜ್ಯ ಮುಸ್ಲಿಮ್ ಸಂಘಟನೆಗಳ ಒಕ್ಕೂಟ ಆಗ್ರಹ

ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ ಹಾಗೂ ರಾಜ್ಯಸಭಾ ಚುನಾವಣೆಗಳು ಹತ್ತಿರವಾಗುತ್ತಿರುವ ಬೆನ್ನಲ್ಲೇ...

ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ 42 ರೂ. ಏರಿಕೆ

ಹೊಸದಿಲ್ಲಿ: 19 ಕೆಜಿ ತೂಕದ ವಾಣಿಜ್ಯ ಸಿಲಿಂಡರ್ ಬೆಲೆಯನ್ನು ಇಂದಿನಿಂದಲೇ ಜಾರಿಗೆ...