ಕೃಷಿ ಬದುಕು ಋಷಿ ಬದುಕಿಗೆ ಸಮ : ಡಾ. ನಾಗರಾಜ ಶೆಟ್ಟಿ

Date:

ಮೂಡುಬಿದಿರೆ: ಮಣ್ಣಿನ ಕಣಕಣದಲ್ಲೂ ಅಂತರ್ಯಾಮಿಯಾಗಿರುವ ಸತ್ಯ ಸತ್ವವನ್ನು ಅರ್ಥೈಸಿಕೊಂಡು ತೊಡಗಿಸಿಕೊಂಡರೆ ಜೀವನದಲ್ಲಿ ಯಶಸ್ಸು ಸಿದ್ದ. ಕೃಷಿ ಬದುಕಿನಲ್ಲಿ ತಂತ್ರಜ್ಞಾನ ಬಳಕೆ ಕೃಷಿ ಪ್ರವಾಸೋದ್ಯಮ ಆರ್ಥಿಕ ಬೆಂಬಲ ಮತ್ತು ಉದ್ಯಮಶೀಲತೆಯಂತಹ ಹಲವು ಸಾಧ್ಯತೆಗಳಿವೆ. ಕೃಷಿ ಬದುಕು ಋಷಿ ಬದುಕಿನಂತೆ ಅದೊಂದು ತಪಸ್ಸು, ಇದು ದೇಶದ ಆರ್ಥಿಕ ಮೂಲದ ಪ್ರಧಾನ ಭಾಗವಾಗಿದ್ದು ಮಣ್ಣು ನೀರು ಮತ್ತು ಜೈವಿಕ ವೈವೇದ್ಯತೆಯನ್ನು ಕಾಪಾಡುವುದು. ಪ್ರತಿ ಕೃಷಿಕನೂ ಒಬ್ಬ ಸಂತನಂತೆ. ಭೂಮಿ ತಾಯಿಯ ನಗುವಿಗೆ ಕೃಷಿಯೇ ಮೂಲಕ ಕಾರಣ ಎಂದು ಸಪ್ತಗಿರಿ ಫಾರಂ ಅಂಬೋರಿಯ ಪ್ರಗತಿಪರ ಕೃಷಿಕರಾದ ಡಾ. ನಾಗರಾಜ ಶೆಟ್ಟಿ ಹೇಳಿದರು. ಅವರು ಮೂಡುಮಾರ್ನಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯುತ್ತಿರುವ ಎಕ್ಸಲೆಂಟ್ ಪದವಿಪೂರ್ವ ಕಾಲೇಜಿನ ವಾರ್ಷಿಕ ವಿಶೇಷ ಶಿಬಿರದ ಶೈಕ್ಷಣಿಕ ಕಾರ್ಯಕ್ರಮದಲ್ಲಿ ಕೃಷಿ ಬದುಕಿನ ಸಾಧ್ಯತೆಗಳು ಕುರಿತಾದ ವಿಷಯದಲ್ಲಿ ಉಪನ್ಯಾಸ ನೀಡುತ್ತಾ ಹೇಳಿದರು ಎಕ್ಸಲೆಂಟ್ ಮೂಡುಬಿದಿರೆಯ ಶೈಕ್ಷಣಿಕ ನಿರ್ದೇಶಕರಾದ ಪ್ರೊ. ಪುಷ್ಪರಾಜ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಹಿರಿಯ ಶಿಕ್ಷಕಿ ಡೈಸಿ. ಎಸ್ ಪಿಂಟೋ,ಸುಗಂಧಿ, ಎಸ್ ಡಿ ಎಂ ಸಿ ಉಪಾಧ್ಯಕ್ಷೆ ಸೌಮ್ಯ , ಶಿಬಿರಾಧಿಕಾರಿ ತೇಜಸ್ವಿ ಭಟ್ , ಸಹ ಶಿಬಿರಾಧಿಕಾರಿಗಳಾದ ಪ್ರಶಾಂತ ಶೆಟ್ಟಿ , ಡಾ. ವಾದಿರಾಜ ಕಲ್ಲೂರಾಯ, ಸಂಧ್ಯಾ, ದಿವ್ಯ ಲಕ್ಷ್ಮಿ ರೈ, ಪ್ರದೀಪ ಅಶೋಕ , ಭಾಸ್ಕರ ನೆಲ್ಯಾಡಿ , ವಿಕ್ರಮ ನಾಯಕ್, ಯಶಸ್ವಿನಿ ಉಪಸ್ಥಿತರಿದ್ದರು. ಶಿಬಿರಾರ್ಥಿ ಸುಜಲ್ ಶೆಟ್ಟಿ ನಿರೂಪಿಸಿ ಗುರುರಾಜ್ ವಂದಿಸಿದರು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ನಾಗರಿಕ ಸೇವಾ ಸಮಿತಿ (ರಿ.) ಅಂಬೇಡ್ಕರ್ ನಗರ ಕರಂಬಾರು 12ನೇ ವಾರ್ಷಿಕೋತ್ಸವ

ಬಜ್ಪೆ: ನಾಗರಿಕ ಸೇವಾ ಸಮಿತಿ (ರಿ.) ಅಂಬೇಡ್ಕರ್ ನಗರ ಕರಂಬಾರು 12...

ಚಿಗಟೇರಿ ಆಸ್ಪತ್ರೆಯ ಅವ್ಯವಸ್ಥೆ ಬಯಲಿಗೆ! ತಕ್ಷಣ ಕ್ರಮಕ್ಕೆ ಅಫ್ಸರ್ ಕೊಡ್ಲಿಪೇಟೆ ಒತ್ತಾಯ

ದಾವಣಗೆರೆ, ಎಪ್ರಿಲ್ 17: ನಗರದ ಪ್ರಮುಖ ಆರೋಗ್ಯ ಕೇಂದ್ರವಾದ ಚಿಗಟೇರಿ ಜಿಲ್ಲಾ...

ಮೂಡಬಿದಿರೆ ಶ್ರೀ ಮಹಾವೀರ ಕಾಲೇಜಿನ ವಜ್ರಮಹೋತ್ಸವ: ಮೆರವಣಿಗೆ

ಮೂಡಬಿದಿರೆ: ಇಲ್ಲಿನ ಶ್ರೀ ಮಹಾವೀರ ಕಾಲೇಜು ಅರವತ್ತು ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ...

ಸಿಬಿಎಸ್‌ಇ ಫಲಿತಾಂಶ: ಮೂಡಬಿದಿರೆ ಆಳ್ವಾಸ್ ನ 46 ವಿದ್ಯಾರ್ಥಿಗಳಿಗೆ 95% ಕ್ಕೂ ಹೆಚ್ಚು ಅಂಕ: ನಾಲ್ಕು ವಿದ್ಯಾರ್ಥಿಗಳು ಶೇ 99ರ ಸಾಧನೆ

ಮೂಡಬಿದಿರೆ: ಕೇಂದ್ರ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (ಸಿಬಿಎಸ್‌ಇ) ನಡೆಸಿದ ಹತ್ತನೆ...