ಮಿಜಾರು ಕೆ.ಪಿ.ಎಸ್. ವಿದ್ಯಾಲಯದಲ್ಲಿ ಗ್ರಾಹಕ ಹಿತರಕ್ಷಣಾ ಮಾಹಿತಿ

Date:

ಮೂಡುಬಿದಿರೆ : ತಾಲೂಕಿನ ಮಿಜಾರು ಕರ್ನಾಟಕ ಪಬ್ಲಿಕ್ ವಿದ್ಯಾಲಯದಲ್ಲಿ ಶುಕ್ರವಾರದಂದು ಗ್ರಾಹಕ ಹಿತರಕ್ಷಣಾ ಮಾಹಿತಿ ಕಾಯ೯ಕ್ರಮ ನಡೆಯಿತು.

ದ.ಕ.ಜಿಲ್ಲಾ ಗ್ರಾಹಕ ಸಂಘಟನೆ ಒಕ್ಕೂಟದ ಜೊತೆ ಕಾರ್ಯದರ್ಶಿ ರಾಯಿ ರಾಜ ಕುಮಾರ್ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾಹಿತಿ ಹಕ್ಕು ಕಾಯಿದೆ, ಗ್ರಾಹಕ ಹಿತ ರಕ್ಷಣಾ ಕಾಯಿದೆ, ಆಯ್ಕೆ, ಮಾಹಿತಿ, ಇತ್ಯಾದಿ ಹಕ್ಕುಗಳ ಮಾಹಿತಿಯನ್ನು ಹಲವಾರು ಉದಾಹರಣೆಗಳೊಂದಿಗೆ ನೀಡಿದರು. ವಸ್ತುಗಳ ಗುಣಮಟ್ಟ, ದಾಖಲೆ ಇಟ್ಟುಕೊಳ್ಳುವ ಅಗತ್ಯಗಳು, ಆಯೋಗಕ್ಕೆ ದೂರು ನೀಡುವ ವಿಧಾನಗಳ, ಪರಿಹಾರ ಪಡೆಯುವ ಕ್ರಮಗಳು ಬಗೆಗೂ ಮಾಹಿತಿಯನ್ನು ನೀಡಿದರು.

ವಿದ್ಯಾಸಂಸ್ಥೆಯ ಉಪ ಪ್ರಾಂಶುಪಾಲೆ ಪುಷ್ಪ ಅಧ್ಯಕ್ಷತೆ ವಹಿಸಿದ್ದರು. ಗ್ರಾಹಕ ಕ್ಲಬ್ ಸಂಯೋಜಕ ಶಿಕ್ಷಕಿ ಜಯಶ್ರೀ , ಇಕೋ ಕ್ಲಬ್ ನ ಸಂಚಾಲಕಿ ಪವಿತ್ರ ಕುಮಾರಿ ಉಪಸ್ಥಿತರಿದ್ದರು. ಶಿಕ್ಷಕಿಯರಾದ ವಿದ್ಯಾ ಕಾರ್ಯಕ್ರಮ ನಿರ್ವಹಿಸಿದರು. ಅನಿತಾ ವಂದಿಸಿದರು.
.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಮೂರು ವರ್ಷಗಳ ಬಳಿಕ ಕೆಪಿಸಿಸಿ ಕಚೇರಿಗೆ ಭೇಟಿ ನೀಡಿದ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್

ಬೆಂಗಳೂರು: ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರು ಮೂರು ವರ್ಷಗಳ ಬಳಿಕ ಕೆಪಿಸಿಸಿ...

ಕನಿಷ್ಠ ಎರಡು ಪರಿಷತ್ ಸ್ಥಾನ, ಒಂದು ರಾಜ್ಯಸಭಾ ಸ್ಥಾನ ಮುಸ್ಲಿಮರಿಗೆ ಕೊಡಿ: ಕಾಂಗ್ರೆಸ್‌ಗೆ ರಾಜ್ಯ ಮುಸ್ಲಿಮ್ ಸಂಘಟನೆಗಳ ಒಕ್ಕೂಟ ಆಗ್ರಹ

ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ ಹಾಗೂ ರಾಜ್ಯಸಭಾ ಚುನಾವಣೆಗಳು ಹತ್ತಿರವಾಗುತ್ತಿರುವ ಬೆನ್ನಲ್ಲೇ...

ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ 42 ರೂ. ಏರಿಕೆ

ಹೊಸದಿಲ್ಲಿ: 19 ಕೆಜಿ ತೂಕದ ವಾಣಿಜ್ಯ ಸಿಲಿಂಡರ್ ಬೆಲೆಯನ್ನು ಇಂದಿನಿಂದಲೇ ಜಾರಿಗೆ...