ಶಿಕ್ಷಕ ಸಿಬಂದಿ ನವೀನ್ ಚಂದ್ರರವರಿಗೆ ವಿದಾಯ ಸಮಾರಂಭ

Date:

ಮಂಗಳೂರು: ಶಿಕ್ಷಕರ ಸಹಕಾರಿ ಕ್ರೆಡಿಟ್ ಸಂಘದ ಅದೀನ ಸಂಸ್ಥೆಯಾದ ಶಿಕ್ಷಕ ಮಳಿಗೆಯಲ್ಲಿ ಸುಧೀರ್ಘ ಸೇವ ಮಾಡಿದ ಸಜ್ಜನ ವ್ಯಕ್ತಿ ನವೀನ್ ಚಂದ್ರರವರು ವಯೋನಿವೃತ್ತಿ ಹೊಂದಿದ ಕಾರಣ ಅವರನ್ನು ಶಿಕ್ಷಕರ ಸಹಕಾರಿ ಸಂಘದಲ್ಲಿ ಅಧ್ಯಕ್ಷರಾದ ಕೆ ಎಂ ಕೆ ಮಂಜುನಾಡಿ ಅವರ ಅಧ್ಯಕ್ಷತೆಯಲ್ಲಿ ಸನ್ಮಾನಿಸಿ , ಬೀಳ್ಕೊಡಲಾಯಿತು.

ಶಿಕ್ಷಕರ ಸಹಕಾರಿ ಸಂಘವು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಶಿಕ್ಷಕರ ಸ್ವತ್ತಾಗಿದ್ದು ಇದನ್ನು ಸಂರಕ್ಷಿಸಿ ಪ್ರಾಮಾಣಿಕ ಸೇವೆಯನ್ನು ಸಂಸ್ಥೆಯಲ್ಲಿ ಸಿಬ್ಬಂದಿಗಳು ಮಾಡಬೇಕು ಎಂದು ಶಿಕ್ಷಕರ ಸಂಘದ ಅಧ್ಯಕ್ಷರು ಸಂಘದ ನೌಕರರಿಗೆ ಕಿವಿಮಾತು ಹೇಳಿದರು. ತಮ್ಮ ಪ್ರಾಮಾಣಿಕ ಸೇವೆಯು ನೀಡಬೇಕು ಆ ಮೂಲಕ ನಿವೃತ್ತಿ ಸಂದರ್ಭದಲ್ಲಿ ತಮ್ಮ ಹಕ್ಕುಗಳನ್ನು ಸಮರ್ಪಕವಾಗಿ ಪಡೆಯಬೇಕು ಎಂದರು.

ಸಂಘದ ಉಪಾಧ್ಯಕ್ಷರಾದ ಉದಯಶಂಕರ್ ನಾಯಕರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಶರ್ಮಿಳಾ ಅವರು ಅಭಿನಂದನಾ ಭಾಷಣ ಮಾಡಿದರು. ನಿರ್ದೇಶಕರಾದ ಶ್ರೀಮತಿ ಹಿಲ್ದಾ ಕ್ಲ ಮೆಲೆಮನ್ಷಿಯಾ, ಪಿಂಟೋ, ಪುಸ್ತಕ ಮಳಿಗೆಯ ಕಾರ್ಯನಿರ್ವಾಹಕ ಸುಭಾಷ್ ನಿವೃತ್ತರ ಬಗ್ಗೆ ಅಭಿನಂದನೆಯನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ನಿರ್ದೇಶಕರುಗಳಾದ ಸರ್ವಶ್ರೀ ಪುಟ್ಟಸ್ವಾಮಿ, ರೂಪಾಕ್ಷ, ಮಹೇಶ್, ಮಾರ್ಕ್ಸ್, ರಘುನಾಥ ಭಟ್, ಚಂದ್ರಶೇಖರ, ತಿಪ್ಪೋಜಿ, ಶ್ರೀಮತಿ ವನಿತಾ ಸುರೇಶ್, ಶ್ರೀಮತಿ ವಾಣಿ, ಶ್ರೀಮತಿ ರೀಟಾ, ಶ್ರೀಮತಿ ಗೀತಾ, ಸಿಬ್ಬಂದಿಗಳಾದ ಸಂಧ್ಯಾ ಲತಾ, ಹರಿಪ್ರಸಾದ್, ಪ್ರಭಾಕರ್ ಮೊದಲಾದವರು ಉಪಸ್ಥಿತರಿದ್ದರು. ರಘುವೀರ ರವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು, ಪ್ರಾರ್ಥನೆಯನ್ನು ನೆರವೇರಿಸಿದ ಶ್ರೀಮತಿ ಲೀಲರವರು ಧನ್ಯವಾದವಿತರು

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಮೂರು ವರ್ಷಗಳ ಬಳಿಕ ಕೆಪಿಸಿಸಿ ಕಚೇರಿಗೆ ಭೇಟಿ ನೀಡಿದ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್

ಬೆಂಗಳೂರು: ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರು ಮೂರು ವರ್ಷಗಳ ಬಳಿಕ ಕೆಪಿಸಿಸಿ...

ಕನಿಷ್ಠ ಎರಡು ಪರಿಷತ್ ಸ್ಥಾನ, ಒಂದು ರಾಜ್ಯಸಭಾ ಸ್ಥಾನ ಮುಸ್ಲಿಮರಿಗೆ ಕೊಡಿ: ಕಾಂಗ್ರೆಸ್‌ಗೆ ರಾಜ್ಯ ಮುಸ್ಲಿಮ್ ಸಂಘಟನೆಗಳ ಒಕ್ಕೂಟ ಆಗ್ರಹ

ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ ಹಾಗೂ ರಾಜ್ಯಸಭಾ ಚುನಾವಣೆಗಳು ಹತ್ತಿರವಾಗುತ್ತಿರುವ ಬೆನ್ನಲ್ಲೇ...

ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ 42 ರೂ. ಏರಿಕೆ

ಹೊಸದಿಲ್ಲಿ: 19 ಕೆಜಿ ತೂಕದ ವಾಣಿಜ್ಯ ಸಿಲಿಂಡರ್ ಬೆಲೆಯನ್ನು ಇಂದಿನಿಂದಲೇ ಜಾರಿಗೆ...