ಸಯ್ಯಿದ್ ಮದನಿ ಶರೀಅತ್ ಕಾಲೇಜು ಉದ್ಘಾಟನೆ, ಸನದುದಾನ ಮಹಾ ಸಮ್ಮೇಳನ

Date:

ಉಳ್ಳಾಲ: ಸನದು ಸ್ವೀಕರಿಸಿ ಹೋಗುವ ವಿದ್ಯಾರ್ಥಿಗಳು ಪಡೆದ ವಿದ್ಯೆಯನ್ನು ಸದುಪಯೋಗ ಮಾಡಿಕೊಳ್ಳುವುದನ್ನು ಮರೆಯಬಾರದು. ಉಳ್ಳಾಲ ದರ್ಗಾದಲ್ಲಿ ನೀಡಲಾದ ಸನದು ಧಾರ್ಮಿಕ, ಲೌಕಿಕ ಶಿಕ್ಷಣ ಬೆಳೆಸುವ ಉದ್ದೇಶದಿಂದ ಆಗಿದೆಎಂದು ಇಂಡಿಯನ್ ಸುಲ್ತಾನುಲ್ ಉಲಮಾ ಉಳ್ಳಾಲ ಖಾಝಿ ಎ.ಪಿ.ಅಬೂಬಕರ್ ಮುಸ್ಲಿಯಾರ್ ಹೇಳಿದರು.

ಅವರು ಸಯ್ಯಿದ್ ಮದನಿ ಶರೀಅತ್ ಕಾಲೇಜು ಉದ್ಘಾಟನೆ ಹಾಗೂ ಸನದುದಾನ ಮಹಾ ಸಮ್ಮೇಳನದಲ್ಲಿ ಕಟ್ಟಡ ಉದ್ಘಾಟಿಸಿ ಮಾತನಾಡಿದರು.ಜನರಿಗೆ ರೋಗ ಬಂದರೆ ಗುಣಪಡಿಸುವುದು ಅಲ್ಲಾಹನು ಆಗಿದ್ದಾನೆ. ನಾನು ಅಸೌಖ್ಯದಿಂದ ಇದ್ದ ಸಂದರ್ಭದಲ್ಲಿ ಬಹಳಷ್ಟು ಚಿಕಿತ್ಸೆ, ಪ್ರಾರ್ಥನೆ ನಡೆದಿದೆ. ಈಗ ನನ್ನ ರೋಗವನ್ನು ಅಲ್ಲಾಹು ಗುಣಪಡಿಸಿದ್ಜು, ಈಗ ಕಾಲೇಜಿನಲ್ಲಿ ಪ್ರತಿದಿನ ದರ್ಸ್ ಕ್ಲಾಸ್ ಮಾಡುತ್ತಿದ್ದೇನೆ ಎಂದರು.

ಉಳ್ಳಾಲ ದಲ್ಲಿ ಶಿಕ್ಷಣ ಬೆಳೆಸಲು ತಾಜುಲ್ ಉಲಮಾ ತಂಙಳ್ ಬಹಳಷ್ಟು ಕೆಲಸ ಮಾಡಿದ್ದರು. ಉಳ್ಳಾಲ ದರ್ಗಾ ದಲ್ಲಿ ಸ್ಥಾಪಿಸಲಾದ ನೂತನ ಕಟ್ಟಡ ಧಾರ್ಮಿಕ, ಲೌಕಿಕ ಶಿಕ್ಷಣ ಬೆಳೆಸುವ ಉದ್ದೇಶದಿಂದ ಆಗಿದೆ . ಆ ಕೆಲಸ ವನ್ನು ಮಾಡಬೇಕು. ನಮ್ಮ ಏನು ಕಾರ್ಯ ಮಾಡಿದರೂ ಅದು ಶಿಕ್ಷಣಕ್ಕೆ ಪೂರಕವಾಗಿ ಇರಬೇಕು ಎಂದು ಕರೆ ನೀಡಿದರು.

ಸ್ಪೀಕರ್ ಯುಟಿ ಖಾದರ್ ಮಾತನಾಡಿ,ಉಳ್ಳಾಲ ದಲ್ಲಿ ನಿರ್ಮಾಣ ಗೊಂಡ ಸಯ್ಯಿದ್ ಮದನಿ ಶರೀಯತ್ ಕಾಲೇಜು ನೂತನ ಕಟ್ಟಡ ಉಳ್ಳಾಲಕ್ಕೆ ದೊಡ್ಡ ಕಿರೀಟ ಆಗಿದೆ. ಸಾಮಾಜಿಕ, ಶೈಕ್ಷಣಿಕ ಧಾರ್ಮಿಕ ಶಿಕ್ಷಣ ನಮಗೆ ಮುಖ್ಯ ಆಗಿದೆ. ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಯಾವುದೇ ಕೊರತೆ ಶಿಕ್ಷಣ ದಲ್ಲಿ ಆಗಬಾರದು ಎಂಬ ಉದ್ದೇಶದಿಂದ ಈ ಕಟ್ಟಡ ನಿರ್ಮಿಸಲಾಗಿದೆ ಎಂದರು.ಸಯ್ಯದ್ ಅತ್ತಾವುಲ್ಲಾ ತಂಙಳ್ ಉದ್ಯಾವರ ದಿಕ್ಸೂಚಿ ಭಾಷಣ ಮಾಡಿದರು.ಎ

ಸ್ ಬಿ ಮುಹಮ್ಮದ್ ದಾರಿಮಿ ಶಿಕ್ಷಣ ಅಗತ್ಯತೆ ಬಗ್ಗೆ ಮಾತನಾಡಿದರು.ಶರೀಅತ್ ಕಾಲೇಜು ಪ್ರಿನ್ಸಿಪಾಲ್ ಅಹ್ಮದ್ ಕುಟ್ಟಿ ಸಖಾಫಿ, ಹುಸೈನ್ ಸಖಾಫಿ ಚುಳ್ಳಿಕೋಡ್ ಧಾರ್ಮಿಕ ಉಪನ್ಯಾಸ ನೀಡಿದರು.ಹುಸೈನ್ ಸಅದಿ ಕೆಸಿರೋಡ್ ಮಾತನಾಡಿ ಶಿಕ್ಷಣ ಅಭಿವೃದ್ಧಿಗೆ ಕಟ್ಟಡದ ಅಗತ್ಯತೆ ಬಗ್ಗೆ ವಿವರಿಸಿದರು.ಸಯ್ಯಿದ್ ಹಾಮಿದ್ ಇಂಬಿಚ್ಚಿಕೋಯಾ ತಂಙಳ್ ದುಆ ನೆರವೇರಿಸಿದರು.

ದರ್ಗಾ ಅಧ್ಯಕ್ಷ ಹನೀಫ್ ಹಾಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಕಟ್ಟಡ ನಿರ್ಮಾಣಕ್ಕೆ ಸಹಕಾರ ನೀಡಿದ ಕರ್ನಾಟಕ ಸರ್ಕಾರದ ಮುಖ್ಯ ಮಂತ್ರಿ ಸಿದ್ದರಾಮಯ್ಯ, ಸಚಿವ ಝಮೀರ್ ಅಹ್ಮದ್, ರಹೀಮ್ ಖಾನ್,ಸ್ಪೀಕರ್ ಯುಟಿ ಖಾದರ್ ಅವರ ಸೇವೆ ಬಗೆ ಶ್ಲಾಘನೆ ವ್ಯಕ್ತಪಡಿಸಿದರು.ಉಳ್ಳಾಲ ದಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳಿಗೆ ಭಾರತದ ಗ್ರಾಂಡ್ ಮುಫ್ತಿ ಎ.ಪಿ.ಅಬೂಬಕರ್ ಮುಸ್ಲಿಯಾರ್ ಸನದು ಪ್ರದಾನ ಮಾಡಿದರು.ಈ ಕಾರ್ಯಕ್ರಮ ದಲ್ಲಿ ಅಸಯ್ಯಿದ್ ಜಲಾಲುದ್ದೀನ್ ಅಲ್ ಹಾದಿ ಉಜಿರೆ ತಂಙಳ್ ,ಡಾ.ಮುಹಮ್ಮದ್ ಫಾಝಿಲ್ ರಝ್ವಿ ಕಾವಳಕಟ್ಟೆ ಹಝ್ರತ್ ,ಅಸಯ್ಯಿದ್ ಅಬ್ದುಲ್ ರಹ್ಮಾನ್ ಮಸ್ಊದ್ ತಂಙಳ್, ಭಾತಿಷಾ ಸಖಾಫಿ ಆಲಪ್ಪುಝ, ಯೆನೆಪೋಯ ಡಾ.ಅಬ್ದುಲ್ಲಾ ಕುಂಞಿ ಹಾಜಿ ,ಅಶ್ರಫ್ ತಂಙಳ್ ಆದೂರು,ಅಬ್ದುಲ್ ಖಾದರ್ ಮದನಿ, ಮೂಳೂರು ಅಬ್ದುಲ್ ರಹ್ಮಾನ್ ಮದನಿ , ಕೃಷ್ಣಾಪುರ ಖಾಝಿ ಇಬ್ರಾಹಿಂ ಮದನಿ, ಎಮ್.ಸಿ.ಮೊಹಮ್ಮದ್ ಫೈಝಿ ಪಟ್ಲ, ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು, ಜುನೈದ್ ತಂಙಳ್, ಸಯ್ಯಿದ್ ಜಮಲುಲ್ಲೈಲಿ ತಂಙಳ್ ಕಾಜೂರು , ಹುಸೈನ್ ಸ ಅದಿ ಕೆಸಿರೋಡ್, ಅಬ್ದುಲ್ ಖಾದರ್ ಸಖಾಫಿ,ವಳವೂರು ಮುಹಮ್ಮದ್ ಸಅದಿ, ಮಾಜಿ ಮೇಯರ್ ಅಶ್ರಫ್, ಅಬ್ದುಲ್ ರಶೀದ್ ಮದನಿ, ತೋಕೆ ಮುಹ್ಯಿದ್ದೀನ್ ಕಾಮಿಲ್ ಸಖಾಫಿ, ಯು ಎಸ್ ಹಂಝ, ಎಸ್ ಕೆ ಖಾದರ್ ಹಾಜಿ , ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್, ಎ.ಪಿ ಅಬ್ದುಲ್ಲ ಮುಸ್ಲಿಯಾರ್ ಮಾಣಿಕೋತ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ದರ್ಗಾ ಸಮಿತಿ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಶಿಹಾಬುದ್ದೀನ್ ಸಖಾಫಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.ದರ್ಗಾ ಉಪಾಧ್ಯಕ್ಷ ಅಶ್ರಫ್ ರೈಟ್ ವೇ,ಕೋಶಾಧಿಕಾರಿ ನಾಝಿಮ್ ರಹ್ಮಾನ್ ಮುಕ್ಕಚೇರಿ, ಕಾರ್ಯದರ್ಶಿ ಮುಸ್ತಫಾ ಮದನಿ ನಗರ, ಅಶ್ರಫ್ ಹಾಜಿ ಕೋಡಿ, ಝೈನುದ್ದೀನ್ ಮೇಲಂಗಡಿ, ಮುಸ್ತಫಾ ಅಬ್ದುಲ್ಲಾ, ಯು ಎಚ್ ಅಲ್ತಾಫ್,ಫಾರೂಕ್ ಅಬ್ಬಾಸ್ ಕೋಟೆಪುರ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಮೂರು ವರ್ಷಗಳ ಬಳಿಕ ಕೆಪಿಸಿಸಿ ಕಚೇರಿಗೆ ಭೇಟಿ ನೀಡಿದ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್

ಬೆಂಗಳೂರು: ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರು ಮೂರು ವರ್ಷಗಳ ಬಳಿಕ ಕೆಪಿಸಿಸಿ...

ಕನಿಷ್ಠ ಎರಡು ಪರಿಷತ್ ಸ್ಥಾನ, ಒಂದು ರಾಜ್ಯಸಭಾ ಸ್ಥಾನ ಮುಸ್ಲಿಮರಿಗೆ ಕೊಡಿ: ಕಾಂಗ್ರೆಸ್‌ಗೆ ರಾಜ್ಯ ಮುಸ್ಲಿಮ್ ಸಂಘಟನೆಗಳ ಒಕ್ಕೂಟ ಆಗ್ರಹ

ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ ಹಾಗೂ ರಾಜ್ಯಸಭಾ ಚುನಾವಣೆಗಳು ಹತ್ತಿರವಾಗುತ್ತಿರುವ ಬೆನ್ನಲ್ಲೇ...

ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ 42 ರೂ. ಏರಿಕೆ

ಹೊಸದಿಲ್ಲಿ: 19 ಕೆಜಿ ತೂಕದ ವಾಣಿಜ್ಯ ಸಿಲಿಂಡರ್ ಬೆಲೆಯನ್ನು ಇಂದಿನಿಂದಲೇ ಜಾರಿಗೆ...