ನಂತೂರಿನ ಡಾ.ಎನ್.ಎಸ್.ಎ.ಎಮ್ ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನೆ ಮತ್ತು ಫ್ರೆಶರ್ಸ್ ಡೇ ಸಂಭ್ರಮ

Date:

ಮಂಗಳೂರು: ನಂತೂರಿನ ಡಾ. ಎನ್.ಎಸ್.ಎ.ಎಮ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಘದ ಉದ್ಘಾಟನೆ’ ಮತ್ತು ‘ಫ್ರೆಶರ್ಸ್ ಡೇ’ ಕಾರ್ಯಕ್ರಮ ಉರ್ವ ಸ್ಟೋರ್‌ನ ಅಂಬೇಡ್ಕರ್ ಭವನದಲ್ಲಿ ನಡೆಯಿತು.
ವಿದ್ಯಾರ್ಥಿ ಸಂಘದ ಉದ್ಘಾಟನೆ’ ಮತ್ತು ‘ಫ್ರೆಶರ್ಸ್ ಡೇ’ ಕಾರ್ಯಕ್ರಮಕ್ಕೆ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, “ವಿದ್ಯಾರ್ಥಿ ಸಮೂಹ ದೇಶದ ಶಕ್ತಿ. ತಂದೆ, ತಾಯಿ ಹಾಗೂ ಗುರುಗಳ ಆಶೀರ್ವಾದವಿದ್ದಾಗ ವಿದ್ಯಾರ್ಥಿಗಳಿಗೆ ಶ್ರೇಯಸ್ಸು ಖಂಡಿತ. ವಿದ್ಯಾರ್ಥಿ ದೆಸೆಯಲ್ಲಿ ನಾಯಕತ್ವ ಗುಣಗಳನ್ನು ಬೆಳೆಸಿಕೊಂಡಾಗ ಮುಂದೆ ಸಮಾಜಕ್ಕೆ ಒಂದು ಸಂಪನ್ಮೂಲವಾಗಿ ಅವರು ಸಿದ್ಧರಾಗುತ್ತಾರೆ. ವಿಕಸಿತ ಭಾರತ ನಿರ್ಮಾಣಕ್ಕೆ ವಿದ್ಯಾರ್ಥಿಗಳ ಪಾತ್ರ ಪ್ರಾಮುಖ್ಯವಾಗಿದೆ “ಎಂದು ಹೇಳಿದರು.

ಮಂಗಳೂರು ಉಪ-ವಿಭಾಗದ ಸಹಾಯಕ ಆಯುಕ್ತೆ ಮೀನಾಕ್ಷಿ ಆರ್ಯ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, “ವಿದ್ಯಾರ್ಥಿ ಸಂಘವು ಕೇವಲ ಒಂದು ಸಮಿತಿಯಲ್ಲ, ಅದು ವಿದ್ಯಾರ್ಥಿಗಳ ನಾಯಕತ್ವ ಗುಣವನ್ನು ಬೆಳೆಸುವ ವೇದಿಕೆಯಾಗಿದೆ. ಹೊಸ ವಿದ್ಯಾರ್ಥಿಗಳಿಗೆ , ಈ ಕಾಲೇಜು ಜೀವನದ ಅತ್ಯುತ್ತಮ ಘಳಿಗೆಗಳಿಗೆ ಸಾಕ್ಷಿಯಾಗಲಿದೆ.” ಎಂದು ಹೇಳಿದರು.

ಖ್ಯಾತ ಸಿನಿಮಾ ಮತ್ತು ನಾಟಕ ನಿರ್ಮಾಪಕ,ನಿರ್ದೇಶಕ ,ನಟ ಶ್ರೀ ವಿಜಯಕುಮಾರ್ ಕೊಡಿಯಾಲ್ ಬೈಲ್ ಗೌರವ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, “ಒಬ್ಬ ವ್ಯಕ್ತಿ ಯಾವುದೇ ಕ್ಷೇತ್ರದಲ್ಲಿ ಎಷ್ಟೇ ಎತ್ತರಕ್ಕೆ ಏರಿದರೂ ಶಿಕ್ಷಣ ಎಂಬುದು ಪ್ರಾಮುಖ್ಯವಾಗಿರುತ್ತದೆ. ಹಾಗಾಗಿ ಕಲಿಯುವ ದಿನಗಳಲ್ಲಿ ಶಿಕ್ಷಣವನ್ನು ಕಡೆಗಣಿಸದೆ ವಿದ್ಯಾರ್ಥಿಗಳು ಜೀವನದಲ್ಲಿ ಆಚರಿಸು ಸಾಧಿಸಬೇಕು.” ಎಂದು ಕಿವಿ ಮಾತು ಹೇಳಿದರು.

ಈ ಸಂದರ್ಭದಲ್ಲಿ ಕಾಲೇಜಿನ ವಾರ್ಷಿಕ ಸಂಚಿಕೆ ಬಿಡುಗಡೆಗೊಳಿಸಲಾಯಿತು.

ಸಂಸ್ಥೆಯ ಪ್ರಾಂಶುಪಾಲ ಹಾಗೂ ದ.ಕ ಜಿಲ್ಲಾ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಡಾ. ನವೀನ್ ಶೆಟ್ಟಿ ಕೆ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿ ಸಂಘದ ನೂತನ ನಾಯಕರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣವಚನ ಬೋಧಿಸಿ ಶುಭ ಹಾರೈಸಿದರು.

ಕಳೆದ ಶೈಕ್ಷಣಿಕ ಸಾಲಿನಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ನಂತರ ವಿದ್ಯಾರ್ಥಿಗಳು ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಉಪಪ್ರಾಂಶುಪಾಲೆ ಅನ್ನಪೂರ್ಣ ನಾಯಕ್, ಕಾರ್ಯಕ್ರಮ ಸಂಯೋಜಕ ಟಿ ವಿ ಗಿರಿ, ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಶ್ರಾವ್ಯ, ಉಪನ್ಯಾಸಕರಾದ ಸುಮನ್, ಸುಕನ್ಯಾ ರೈ, ಸುಕನ್ಯಾ, ಸುಪ್ರಿಯಾ, ಶ್ರದ್ಧಾ, ಚೈತ್ರಾ ಬೇಕಲ್ ಉಪಸ್ಥಿತರಿದರು.

ಉಪನ್ಯಾಸಕಿ ವಿಸ್ಮಿತ ಸ್ವಾಗತಿಸಿದರು. ವಿದ್ಯಾರ್ಥಿ ಕಾರ್ಯದರ್ಶಿ ಜೀವಿತಾ ವಂದಿಸಿದರು. ಉಪನ್ಯಾಸಕಿ ದಿವ್ಯ ವಿಶಾಲ್ ನಿರ್ವಹಿಸಿದರು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಜುಲೈ 20: ಕಲ್ಲಡ್ಕ ಮಸೀದಿಯ ನೂತನ ಖಾಝಿಯಾಗಿ ಜಿಫ್ರಿ ಮುತ್ತುಕೋಯಾ ತಂಙಳ್ ಅಧಿಕಾರ ಸ್ವೀಕಾರ

ಬಂಟ್ವಾಳ: ಇತ್ತೀಚೆಗೆ ನಿಧನರಾದ ಶೈಖುನಾ ತ್ವಾಖಾ ಉಸ್ತಾದ್ ಅವರ ಉತ್ತರಾಧಿಕಾರಿಯಾಗಿ ಕಲ್ಲಡ್ಕ...

ಉಚ್ಚಿಲ: ಸೋಮೇಶ್ವರ ಪೆಟ್ರೋಲ್ ಪಂಪ್‌ನಲ್ಲಿ ಸ್ಪೀಡ್-೧೦೦ ಮಾರುಕಟ್ಟೆಗೆ ಬಿಡುಗಡೆ

ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ಪರಿಚಯಿಸಿರುವ ಅತಿ ಉನ್ನತ ಮಟ್ಟದ...

ಟಿಪ್ಪುನಗರ ದಾರುನ್ನಜಾತ್ ಎಜುಕೇಶನಲ್ ಸೆಂಟರ್ ವಿದ್ಯಾಸಂಸ್ಥೆಯ 16ನೇ ವಾರ್ಷಿಕೋತ್ಸವದ ಸ್ವಾಗತ ಸಮಿತಿ ರಚನೆ

ವಿಟ್ಲ: ವಿಟ್ಲದ ಟಿಪ್ಪು ನಗರ ದಾರುನ್ನಜಾತ್ ಎಜುಕೇಶನಲ್ ಸೆಂಟರ್ ವಿದ್ಯಾಸಂಸ್ಥೆಯ 16ನೇ...