ರಂಗ ಸ್ವರೂಪ(ರಿ) ಕುಂಜತ್ತಬೈಲ್, ವತಿಯಿಂದ ರಂಗ ಸ್ವರೂಪ ‘ರಂಗೋತ್ಸವ’ 2026 ಮಕ್ಕಳ ಬೇಸಿಗೆ ಶಿಬಿರ

Date:

ಮಂಗಳೂರು: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಂಗ ಸ್ವರೂಪ(ರಿ) ಕುಂಜತ್ತಬೈಲ್,ಮಂಗಳೂರು ಇದರ ವತಿಯಿಂದ ರಂಗ ಸ್ವರೂಪ ‘ರಂಗೋತ್ಸವ’ 2026 ಮಕ್ಕಳ ಬೇಸಿಗೆ ಶಿಬಿರ ಕಾರ್ಯಕ್ರಮವು ದ.ಕ ಜಿ.ಪಂ ಮಾ.ಹಿರಿಯ ಪ್ರಾಥಮಿಕ ಶಾಲೆ ಮರಕಡ, ಕುಂಜತ್ತಬೈಲ್ ಇಲ್ಲಿ ರಂಗ ಸ್ವರೂಪ ತಂಡದ ಉಪಾಧ್ಯಕ್ಷರಾದ ಹುಸೈನ್ ರಿಯಾಝ್ ರವರ ಅಧ್ಯಕ್ಷತೆಯಲ್ಲಿ ಜರುಗಿತು.

ಖ್ಯಾತ ಕಲಾವಿದ ಪ್ರಶಸ್ತಿ ವಿಜೇತ ಶಿಕ್ಷಕ ಚೇತನ್ ಕೊಪ್ಪ ರವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಮನುಷ್ಯ ಇತಿಹಾಸದಿಂದ ಪಾಠ ಕಲಿಯುವುದಿಲ್ಲ,ಇತಿಹಾಸ ಮನುಷ್ಯ ನಿಗೆ ಪಾಠ ಕಲಿಸುತ್ತದೆ.ರಂಗಸ್ವರೂಪ ಶಿಬಿರದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಇವತ್ತು ಸ್ವತಂತ್ರರಾಗಿ ರಾಜ್ಯದಾದ್ಯಂತ ಶಿಬಿರವನ್ನು ಸಂಯೋಜಿಸುತ್ತಿರುವುದು ರಂಗಸ್ವರೂಪದ ಯಶಸ್ಸಿನ ಮೆಟ್ಟಲುಗಳು ಎಂದು ಕರೆಕೊಟ್ಟರು.


ಯುವ ಉದ್ಯಮಿ ಸಾಕ್ಷತ್ ಶೆಟ್ಟಿ ಕಾವೂರು, ಮರಕಡ ಶಾಲಾ ಮುಖ್ಯೋಪಾಧ್ಯಾಯರಾದ ಗಣೇಶ್ ಕುಮಾರ್,ರಂಗ ಸ್ವರೂಪ ಕಾರ್ಯದರ್ಶಿ ಝುಬೇರ್ ಖಾನ್ ಕುಡ್ಲ, ಕಲಾವಿದ ನವೀನ್ ಅಡ್ಕರ್, ಶಾಲಾ ಶಿಕ್ಷಕಿ ಶೋಭಾ,ರೈಹಾನ್ ಮುಂತಾದವರು ಉಪಸ್ಥಿತರಿದ್ದರು.


ರಂಗ ಸ್ವರೂಪ ತಂಡದ ಹನೀಸಾ ಸವಾದ್ ಸ್ವಾಗತಿಸಿದರು, ತಸ್ಲೀಮಾ ಬಾನು ಧನ್ಯವಾದ ಗೈದರು,ರೆಹಮಾನ್ ಖಾನ್ ಕುಂಜತ್ತಬೈಲ್ ನಿರೂಪಿಸಿದರು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಮೂರು ವರ್ಷಗಳ ಬಳಿಕ ಕೆಪಿಸಿಸಿ ಕಚೇರಿಗೆ ಭೇಟಿ ನೀಡಿದ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್

ಬೆಂಗಳೂರು: ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರು ಮೂರು ವರ್ಷಗಳ ಬಳಿಕ ಕೆಪಿಸಿಸಿ...

ಕನಿಷ್ಠ ಎರಡು ಪರಿಷತ್ ಸ್ಥಾನ, ಒಂದು ರಾಜ್ಯಸಭಾ ಸ್ಥಾನ ಮುಸ್ಲಿಮರಿಗೆ ಕೊಡಿ: ಕಾಂಗ್ರೆಸ್‌ಗೆ ರಾಜ್ಯ ಮುಸ್ಲಿಮ್ ಸಂಘಟನೆಗಳ ಒಕ್ಕೂಟ ಆಗ್ರಹ

ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ ಹಾಗೂ ರಾಜ್ಯಸಭಾ ಚುನಾವಣೆಗಳು ಹತ್ತಿರವಾಗುತ್ತಿರುವ ಬೆನ್ನಲ್ಲೇ...

ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ 42 ರೂ. ಏರಿಕೆ

ಹೊಸದಿಲ್ಲಿ: 19 ಕೆಜಿ ತೂಕದ ವಾಣಿಜ್ಯ ಸಿಲಿಂಡರ್ ಬೆಲೆಯನ್ನು ಇಂದಿನಿಂದಲೇ ಜಾರಿಗೆ...