ಮೈಸೂರು: ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ (SDTU) ಕರ್ನಾಟಕ ರಾಜ್ಯ ಜನರಲ್ ಕೌನ್ಸಿಲ್ ಸಭೆ ರಾಜ್ಯ ಸಂಚಾಲಕರಾದ ಅಥಾವುಲ್ಲಾ ಜೋಕಟ್ಟೆ ರವರ ಅಧ್ಯಕ್ಷತೆಯಲ್ಲಿ ಮೈಸೂರಿನ ಕ್ಯೂ ಸ್ಟಾರ್ ಹೋಟೆಲ್ ನಲ್ಲಿ ಶುಕ್ರವಾರ ನಡೆಯಿತು.
SDTU ರಾಜ್ಯ ಸಂಚಾಲಕ ಅಥಾವುಲ್ಲಾ ಜೋಕಟ್ಟೆ ದ್ವಜಾರೋಹಣಗೆಯ್ಯುವ ಮೂಲಕ ಸಭೆಗೆ ಚಾಲನೆ ಗೈದರು, ಬಳಿಕ ಅಂತರಾಷ್ಟ್ರೀಯ ಕಾರ್ಮಿಕ ದಿನಾಚರಣೆಯನ್ನು ಆಚರಿಸಲಾಯಿತು.

ಸಭಾ ಕಾರ್ಯಕ್ರಮದಲ್ಲಿ SDTU ರಾಜ್ಯ ಸಹ ಸಂಚಾಲಕ ಖಾದರ್ ಫರಂಗಿಪೇಟೆ ಗತವರ್ಷದ ವರದಿ ವಾಚಿಸಿದರು. ಬಳಿಕ ಹಾಜರಿದ್ದ ಎಲ್ಲಾ ಜಿಲ್ಲೆಗಳ ಜಿಲ್ಲಾ ಸಮಿತಿಯ ಸಮ್ಮುಖದಲ್ಲಿ ವರದಿಯನ್ನು ಅನುಮೋದಿಸಲಾಯಿತು. ನಂತರ ನಿಕಟಪೂರ್ವ ರಾಜ್ಯ ಅಡ್-ಹಾಕ್ ಸಮಿತಿಯನ್ನು ಬರ್ಖಾಸ್ತುಗೊಳಿಸಲಾಯಿತು.
ನಂತರ 2026-29 ರ ಸಾಲಿಗೆ SDTU ನೂತನ ಕರ್ನಾಟಕ ರಾಜ್ಯ ಕಾರ್ಯಕಾರಿಣಿ ಸಮಿತಿಯನ್ನು ಚುನಾವಣಾಧಿಕಾರಿಯಾಗಿ ಆಗಮಿಸಿದ್ದ SDTU ರಾಷ್ಟ್ರೀಯ ಸಮಿತಿ ಸದಸ್ಯ ಮೊಹಮ್ಮದ್ ಅಝರ್ ರವರು ರಾಜ್ಯ ಸಮಿತಿ ಚುನಾವಣೆಯ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ರಾಷ್ಟ್ರೀಯ ಸಮಿತಿ ಸದಸ್ಯ ಫಾರೂಕ್ ತಮಿಳುನಾಡು ಉಪಸ್ಥಿತರಿದ್ದರು.
ನೂತನ SDTU ರಾಜ್ಯಾಧ್ಯಕ್ಷರಾಗಿ ಅಥಾವುಲ್ಲಾ ಜೋಕಟ್ಟೆ, ಉಪಾಧ್ಯಕ್ಷರಾಗಿ ವಿಕ್ಟರ್ ಮಾರ್ಟಿಸ್, ಪ್ರಧಾನ ಕಾರ್ಯದರ್ಶಿ ಸಲೀಂ Gk , ಕಾರ್ಯದರ್ಶಿಗಳಾಗಿ ಸೆಯ್ಯದ್ ಅಲ್ತಾಫ್ ಗುಲ್ಬರ್ಗ ಮತ್ತು ಸೆಯ್ಯದ್ ಮೂಸ ಬೆಂಗಳೂರು, ಕೋಶಾಧಿಕಾರಿಯಾಗಿ ಉಬೈದುಲ್ಲಾ ಶರೀಫ್ ಬೆಂಗಳೂರು ಆಯ್ಕೆಗೊಂಡರು. ನಂತರ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯರುಗಳಾಗಿ ಅಬ್ದುಲ್ ಹಮೀದ್ ಸಾಲ್ಮರ, ಅಬೂಬಕರ್ ಮದ್ದ, ಕಾದರ್ ಫರಂಗಿಪೇಟೆ, ಹನೀಫ್ ಮೂಳೂರು, ಆನಂದ್ ಮಿತ್ತಬೈಲ್, ಕಾಸಿಮ್ ರಬ್ಬಾನಿ ಹಾವೇರಿ, ಅಮೀನ್ ಸೇಟ್ ಮೈಸೂರು ರವರನ್ನು ಆಯ್ಕೆಗೊಳಿಸಲಾಯಿತು
SDTU ರಾಷ್ಟೀಯ ಪ್ರಧಾನ ಕಾರ್ಯದರ್ಶಿ ಉಮರ್ ಫಾರೂಕ್ ತಮಿಳುನಾಡು, ಈ ಸಂದರ್ಭದಲ್ಲಿ ಮಾತನಾಡಿ ಸೈದ್ಧಾಂತಿಕವಾಗಿ ಕಾರ್ಮಿಕರು ಸಂಘಟಿತರಾಗಿ ಶಕ್ತಿಯಾದರೆ ಕಾರ್ಮಿಕರು ಎದುರಿಸುವ ಸವಾಲುಗಳನ್ನು ಅತಿಜಯಿಸಬಹುದು ಮಾತ್ರವಲ್ಲ ಪ್ರಜಾತಂತ್ರ ವ್ಯವಸ್ಥೆಯನ್ನು ಗಟ್ಟಿಗೊಳಿಸಿ ಸಂವಿಧಾನದ ಆಶಯಗಳು ಕಟ್ಟಕಡೆಯ ವ್ಯಕ್ತಿಯೂ ಅನುಭವಿಸಲು ಸಹಕಾರಿಯಾಗುತ್ತದೆ ಎಂದರು
ಮುಖ್ಯ ಅತಿಥಿಗಳಾಗಿ ಎಸ್ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು, ನ್ಯಾಯವಾದಿ ಕಲಿಮುಲ್ಲಾ ಶೆರೀಫ್ ಬೆಂಗಳೂರು, ದ್ವಿಚಕ್ರ ವಾಹನದ ಮೆಕ್ಯಾನಿಕಲ್ ಎಸೋಸಿಯೇಷನ್ ಮೈಸೂರು ಅಧ್ಯಕ್ಷ ರವಿ ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.
SDTU ಮೈಸೂರು ಜಿಲ್ಲಾ ಸಮಿತಿ ವತಿಯಿಂದ SDTU ರಾಷ್ಟ್ರೀಯ ನಾಯಕರಿಗೆ, ನೂತನ ರಾಜ್ಯ ಸಮಿತಿಯ ಎಲ್ಲಾ ನಾಯಕರುಗಳಿಗೆ, ಪತ್ರಕರ್ತರಿಗೆ,ಮುಖ್ಯ ಅತಿಥಿಗಳಿಗೆ ಹಾಗೂ ಕೊಡಗು ಜಿಲ್ಲಾ ಸಮಿತಿ ಸದಸ್ಯೆ ಹಸೀನಾರವರಿಗೆ ಸನ್ಮಾನ ಮಾಡಲಾಯಿತು.
ರಾಜ್ಯ ಸಮಿತಿ ಸದಸ್ಯರಾದ ಅಬ್ದುಲ್ ಹಮೀದ್ ಸಾಲ್ಮರ ಕಾರ್ಯಕ್ರಮವನ್ನು ನಿರೂಪಿಸಿದರು.ರಾಜ್ಯ ಪ್ರಧಾನ ಕಾರ್ಯದರ್ಶಿ ಸಲೀಮ್ ಜಿಕೆ ಸ್ವಾಗತಿಸಿ, ರಾಜ್ಯ ಸಮಿತಿ ಸದಸ್ಯರಾದ ಅಮೀನ್ ಸೇಠ್ ಮೈಸೂರು ಧನ್ಯವಾದಗೈದರು.








