ಉಳ್ಳಾಲ,ಖಿದ್ಮತುಲ್ ಇಸ್ಲಾಮ್ ಬದ್ರ್ ಕಮಿಟಿ ಶಾಂತಿನಗರ ನಡುಪದವು ಇದರ 40 ನೇ ವಾರ್ಷಿಕ ಮತ್ತು ಬದ್ರ್ ಟವರ್ ಕಟ್ಟಡ ಉದ್ಘಾಟನೆ ಹಾಗೂ ಏಕದಿನ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮ ಮೇ 7 ಗುರುವಾರ ನಡುಪದವು ಮಸೀದಿ ವಠಾರದಲ್ಲಿ ನಡೆಯಲಿದೆ ಎಂದು ಮಸೀದಿ ಅಧ್ಯಕ್ಷ ಎನ್ ಎಸ್ ಅಬ್ದುಲ್ ನಾಸಿರ್ ಹಾಜಿ ತಿಳಿಸಿದ್ದಾರೆ.
ಅವರು ತೊಕ್ಕೊಟ್ಟು ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಬದ್ರ್ ಟವರ್ ಕಟ್ಟಡ ಉದ್ಘಾಟನೆ ಮೇ 7 ಗುರುವಾರ ಏಳು ಗಂಟೆಗೆ ನಡೆಯಲಿದ್ದು, ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಅಧ್ಯಕ್ಷ ಸಯ್ಯಿದುಲ್ ಉಲಮಾ ಸಯ್ಯಿದ್ ಜಿಪ್ರಿ ಮುತ್ತುಕೋಯ ತಂಙಳ್ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ. ಜುನೈದ್ ಸ ಅದಿ ಅಲ್ ಅಫ್ ಳ ಲಿ ಧಾರ್ಮಿಕ ಉಪನ್ಯಾಸ ಉದ್ಘಾಟಿಸಲಿದ್ದು, ಸ್ಪೀಕರ್ ಯು.ಟಿ.ಖಾದರ್ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಲಿದ್ದಾರೆ. ಮಂಜೇಶ್ವರ ಶಾಸಕ ಎಕೆಎಮ್ ಅಶ್ರಫ್, ಕಣಚೂರು ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕಣಚೂರು ಮೋನು, ಇಬ್ರಾಹೀಮ್ ಕೋಡಿಜಾಲ್, ಕೊಣಾಜೆ ಗ್ರಾ.ಪಂ.ಅಧ್ಯಕ್ಷ ನಝರ್ ಷಾ ಪಟ್ಟೋರಿ, ಬಾಳೆಪುಣಿ ಗ್ರಾಪಂ ಮಾಜಿ ಉಪಾಧ್ಯಕ್ಷ ಸಿ.ಎಂ.ಶರೀಫ್ ಸಹಿತ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಆದೇ ದಿನ ರಾತ್ರಿ 9 ಗಂಟೆಗೆ ಅಬ್ದುಲ್ ಜಬ್ಬಾರ್ ಸಖಾಫಿ ಧಾರ್ಮಿಕ ಉಪನ್ಯಾಸ ಉದ್ಘಾಟಿಸಲಿದ್ದು, ಹಾಫಿಳ್ ನಿಝಾಮುದ್ದೀನ್ ಅಝ್ ಹರಿ ಕುಮ್ಮನಂ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ ಎಂದರು. ಸುದ್ದಿ ಗೋಷ್ಠಿ ಯಲ್ಲಿ ಇಬ್ರಾಹೀಮ್ ನಡುಪದವು, ನಝೀರ್ ನಡುಪದವು, ಸಿ.ಎಂ.ಶರೀಫ್ ನಡುಪದವು, ಇಸ್ಮಾಯೀಲ್ ನಡುಪದವು ಉಪಸ್ಥಿತರಿದ್ದರು.



